Sunday, June 21, 2009

ನಾನು ಮತ್ತು "ನಮ್ಮನೆ" ಎಂಬ ಹೋಂ ಸ್ಟೇ


ನನಗೆ ಕಡವಿನಮನೆಗೆ ಹೋಗಬೇಕೆಂದರೆ ಅದೇನೋ ಒಂಥರಾ ಹಿತವಾದ ಅನುಭವ. ಚಿಕ್ಕಮಗಳೂರಿನಲ್ಲಿ ಡಿಪ್ಲೋಮಾ ಪರೀಕ್ಷೆ ಮುಗಿಸಿದಾಗಲೇ ಕಡವಿನಮನೆಯ ಸ್ಕೆಚ್ ಹಾಕಿದ್ದೆ. ಕಂಚಿಕೊಪ್ಪಕ್ಕೆ ಹೋದ ಮಾರನೇ ದಿನ ಸುಮತ್ತೆ ಮದ್ವೆ, ಅಲ್ಲೆಲ್ಲಾ ಉಢಾಯ್ಸಿ ಸೀದಾ ಕಡವಿನಮನೆಗೆ ಜಮಾಯಿಸಿದೆ. ಅಲ್ಲಿಗೆ ಹೋಗುವಾಗ ಹೀಗೊಂದು "ಹೋಮ್ ಸ್ಟೆ " ನೋಡಿ ಬರುತ್ತೇನೆ ಅಂತ ಲೆಕ್ಕ ಹಾಕಿರಲಿಲ್ಲ. ಅದೂ ಎರಡು ದಿನ ಕಳೆಯುವವರೆಗೂ ಕೊಡಗಿನ ಮಟ್ಟದ ಒಂದು ಹೋಂ ಸ್ಟೆ ಇಲ್ಲೆಲ್ಲಾ ಇರುತ್ತದೆಯೆಂಬ ಅಂದಾಜೂ ನನಗಿರಲಿಲ್ಲ. ಆದರೆ ಆ ರಾತ್ರಿ ಅದು ನನಗೆ ಗೋಚರವಾಯಿತು.
ಸಾಮಾನ್ಯವಾಗಿ ಹೋಂ ಸ್ಟೆ , ರೆಸಾರ್ಟ್ ಗಳೆಂದರೆ ಮೋಜು ಮಜಾ ಮಸ್ತಿ, ಎಣ್ಣೆ ಖಂಡ ತುಂಡು ಅಂತ ನನ್ನ ಸ್ನೆಹಿತರು ಹೇಳಿದ್ದು ಕೇಳಿದ್ದೆ. ಆದರೆ ರಾಘುಮಾವ ( ಈತ ನನಗೆ ನನ್ನ ಅಪ್ಪನಿಗೆ ಎಲ್ಲ ಮಾವ. ಅದು ಹೇಗೆ ಅಂತ ನನ್ನ ಕೇಳಬೇಡಿ) ಒಂದು ತಾಸು ಇದರ ಬಗ್ಗೆ ಕೊರೆದಾಗ ನನಗೆ ಆಶ್ಚರ್ಯ ಬಿಚ್ಚಿಕೊಂಡಿತ್ತು. ಇಲ್ಲಿ ಅದಿಲ್ಲ. ಕೇವಲ ವೆಜ್, ಹಾಗೂ ಪ್ರಕೃತಿಯ ಬಗ್ಗೆ ಕತೆಗಳು, ನವಿರಾದ ಭಾವನೆಗಳನ್ನು ಕೆರಳಿಸುವ ಹಕ್ಕಿ ಪಕ್ಷಿಗಳ ಸ್ವಾರಸ್ಯ ಸುದ್ಧಿಗಳು ಮುಂತಾದ್ದೆ ಎಲ್ಲಾ. ರಾತ್ರಿ ಡೂ ನಥಿಂಗ್ ಎಂದು ಕರೆಯಿಸಿಕೊಳ್ಳುವ ಒಂದು ಗಂಟೆಯ ಕಾಲ ಸುಮ್ಮನೆ ಕುಳಿತು ಸುತ್ತಮುತ್ತಲಿನ ಶಬ್ಧಗಳನ್ನು ಕೇಳಿಸಿಕೊಳ್ಳುವ ಅನುಭವ ಅದ್ಭುತ ಪ್ರಪಂಚವನ್ನು ನಮ್ಮೆದುರಿಗೆ ಬಿಚ್ಚಿಡುತ್ತದೆ. ನಾವು ಹಾಗೆ ಕುಳಿತಾಗ ರಾತ್ರಿ ಒಂಬತ್ತು ಗಂಟೆ. ಕನಿಷ್ಠ ಎಂದರೆ ಹತ್ತು ಹಕ್ಕಿಗಳ ಕಲರವ ನನ್ನನ್ನು ಅಚ್ಚರಿಗೆ ದೂಡಿತ್ತು. ಅಲ್ಲಿಂದ ಹೊರಡುವ ಮನಸ್ಸಿಲ್ಲದೆ ಹೊರಟೆ.
ಒಮ್ಮೆ ನೀವೂ ಹೋಗ್ಬನ್ನಿ ನಮ್ಮನೆಗೆ

1 comment:

  1. ನಾನೂ ಆ ಹೋಮ್ ಸ್ಟೇ ಬಗ್ಗೆ ಊದಿದ್ದೆ, ಕೇಳಿದ್ದೆ ನಿನ್ನ ಶೈಲಿಯಲ್ಲಿ ನಿನ್ನ ಬ್ಲೊಗ್ ಓದವಾಗ ಒಮ್ಮೆ ಹೋಗಿಬರಬೇಕು ಎನ್ನುವ ಆಸೆಯಾಗುತ್ತಾ ಇದೆ. ನಾ ಭಾರತಕ್ಕೆ ಬಂದಾಗ ಒಂದು ಟ್ರಿಪ್ ಹಕೋಣ್.
    ಒಲ್ಲೆಯ ಬರಹ ಹೀಗೇ ಬರೆಯುತ್ತಾ ಇರು.
    "ಆಲ್ ದ ಯೆರಿ ಬೆಸ್ಟು"

    ReplyDelete